Skip to main content
ಮುಂಜಾನೆ ಬೆಳಕು

ಗುರು ಸ್ಥಾನ ಪರಮ ಪವಿತ್ರವಾದದ್ದು. ಶ್ರೀದೇವಿ ನರಗುಂದ.ಬೆಳಗಾವಿ

ಗುರು ಸ್ಥಾನ ಪರಮ ಪವಿತ್ರವಾದದ್ದು. ಶ್ರೀದೇವಿ ನರಗುಂದ.ಬೆಳಗಾವಿ image

ಗುರು ಸ್ಥಾನ ಪರಮ ಪವಿತ್ರವಾದದ್ದು. ಶ್ರೀದೇವಿ ನರಗುಂದ.  ಬೆಳಗಾವಿ,06

ಗುರು ಸ್ಥಾನ ಪರಮ ಪವಿತ್ರವಾದದ್ದು ಶಿಕ್ಷಕರಾಗಿ ದೊರೆತಿರುವ ಅವಕಾಶವನ್ನು ಸಮಾಜಕ್ಕೆ ಧಾರೆ ಎರೆಯುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲೆ ಇದೆ. ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ  ಲಿಂಗಾಯಿತ ಸಂಘಟನೆ. ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ್ ನಗರದಲ್ಲಿ.ದಿ.06.09.2026 ರಂದು ನಿವೃತ್ತನೌಕರರು ಮತ್ತು ಸೇವೆಸಲ್ಲಿಸುತ್ತಿರುವ ಶಿಕ್ಷಕರಿಗೆ ಸನ್ಮಾನ ಕಾಯ೯ಕ್ರಮ ಏಪ೯ಡಿಸಿದ್ದರು. ಶಿಕ್ಷಕ ವೃತ್ತಿಯಿಂದ ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಗೆರಿದರು. ಹೀಗಾಗಿ ಶಿಕ್ಷಕ ವೃತ್ತಿಗೆ ತನ್ನದೇ ಆದ ಗೌರವವಿದೆ. ಅವರ ಜನುಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸುತ್ತಿರುವುದು  ಶಿಕ್ಷಕರಿಗೆ ದೊರೆತಿರುವುದು ಸೌಭಾಗ್ಯ ಎಂದು ಹೇಳಿದರು. ತಂದೆ ತಾಯಿಗೆ ಕೀರ್ತಿ ತರುವಂತ ಮಕ್ಕಳು ಸಿಗುವುದು. ಪುಣ್ಯ ಎಂದರು. ಶರಣೆ ಶ್ರೀದೇವಿ ನರಗುಂದ ತಿಳಿಸಿದರು.ಅಧ್ಯಕ್ಷತೆಯನ್ನು ಸದಾಶಿವ ದೇವರಮನಿ ವಹಿಸಿದ್ದರು.ಅತಿಥಿಗಳಾಗಿ ಸುರೇಶ ನರಗುಂದ ಗುರುಸಿದ್ದಪ್ಪ ರೇವನ್ನವರ ವಹಿಸಿದ್ದರು.ಶರಣ ಲಕ್ಷ್ಮಣ ತಿಪ್ಪನ್ನವರ ದಾಸೋಹಸೇವೆಯನ್ನು ಗೈದರು .ಮಹಾದೇವಿ ಅರಳಿಯವರು ಸಾಮೂಹಿಕಪ್ರಾಥ೯ನೆ ನಡಿಸಿಕೊಟ್ಟರು.ಸಂಗಮೇಶ ಅರಳಿ ನಿರೂಪಿಸಿದರು. ಏಳು ಜನ ನಿವೃತ್ತ ಮತ್ತು ಏಳು ಜನ ಸೇವಾ ನಿರತ ಶಿಕ್ಷಕರಿಗೆ ' ಕಾಯಕ ನಿಷ್ಠ ಶಿಕ್ಷಕ ಪ್ರಶಸ್ತಿ 'ನೀಡಿ ಗೌರವಿಸಲಾಯಿತು ಸನ್ಮಾನಿತರ ಪರವಾಗಿ ಮಹೇಶ ಅಕ್ಕಿ,ಮಹಾದೇವಿ ಪಾಟೀಲ ಮಾತನಾಡಿದರು ಬಸವರಾಜ ಕರಡಿಮಠ, ಶಂಕರಗುಡಸ,ಆನoದ ಕಕಿ೯, ಅನೀಲ ರಘಶೆಟ್ಟಿ, ಪೂಜೇರಿ, ಪ.ಬ.ಕರಿಕಟ್ಟಿ,ಶೇಖರ ವಾಲಿಇಟಗಿ, ಪ್ರಸಾದ ಹಿರೇಮಠ,ಜಯಶ್ರೀ ಚವಲಗಿ, ಸುವಣಾ೯ ಗುಡಸ, ಸುನoದಾ ಮಹದೇವ ಕೆoಪಿಗೌಡರ,ಶೀವಲೀಲಾ ಗೌಡರ,ನoದಾ ಬಗಲಿ, ಅಕ್ಕಮಹಾದೇವಿ ತೆಗ್ಗಿ ಎಂ ವೈ ಮೆಣಸಿನಕಾಯಿ,ಶಿವಾನಂದ ತಲ್ಲೂರ ಸುನಿಲ ಪರೀಟ ,ಎಂ ಎಂ ಕೆಂಪೆಗೌಡ್ರ ಬಸವರಾಜ ಬಿಜ್ಜರಗಿ ಎಂಎಸ್ ಹೊಂಗಲ,ಮಾಲಾ ಅಕ್ಕಿಶೆಟ್ಟಿ,ಶರಣಶರಣೆಯರು ಉಪಸ್ಥಿತರಿದ್ದರು.

Comments